Vasu@60-logo
Home Page2026-01-16T07:29:03+00:00

“ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಕೇವಲ ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳ ಜವಾಬ್ದಾರಿಯಲ್ಲ. ಎಲ್ಲ ಮಕ್ಕಳ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇದೊಂದು ಸಾಮೂಹಿಕ ಜವಾಬ್ದಾರಿ. ಮಕ್ಕಳ ಹಕ್ಕುಗಳು ಕೇವಲ ಘೋಷಣೆಗಳಲ್ಲ. ಬದಲಾಗಿ ಎಲ್ಲೆಡೆ, ಎಲ್ಲ ಮಕ್ಕಳ ಯೋಗಕ್ಷೇಮ ಮತ್ತು ಘನತೆಯನ್ನು ಕಾಪಾಡಲು ಪ್ರತಿಯೊಬ್ಬ ವಯಸ್ಕರ ಅಚಲ ಬದ್ಧತೆಯನ್ನು ಆಗ್ರಹಿಸುವ ಮತ್ತು ಅವುಗಳನ್ನು ತಮ್ಮ ನಡೆ ನುಡಿಯಲ್ಲಿ ಅಳವಡಿಸಿಕೊಳ್ಳಲೇಬೇಕಿರುವ ಮಾರ್ಗದರ್ಶಿ ತತ್ತ್ವಗಳು.”

ಪ್ರಿಯರೆ,
ನಿಮ್ಮೆಲ್ಲರ ಗೆಳೆಯ, ಸಹೋದ್ಯೋಗಿ, ನನ್ನ ಬಾಳಸಂಗಾತಿ ಎನ್.ವಿ. ವಾಸುದೇವ ಶರ್ಮಾ ೬೦ ವರ್ಷಗಳನ್ನು ಪೂರೈಸಿ ಮುನ್ನಡೆದಿದ್ದಾರೆ. ಇಷ್ಟು ಕಾಲದಲ್ಲಿ ಅವರನ್ನು ಕಂಡವರು, ಜೊತೆಯಾಗಿ ಶಿಕ್ಷಣ ಪಡೆದವರು, ಕೆಲಸ ಮಾಡಿದವರು, ಇತ್ಯಾದಿ ವಾಸು ಅವರೊಡನೆಯ ಅನುಭವಗಳನ್ನು ಕುರಿತು ವಿವಿಧ ಬರಹಗಳಲ್ಲಿ  ಹಂಚಿಕೊಂಡಿದ್ದಾರೆ.

ಇದರಲ್ಲಿ ಬಾಲ್ಯದ ನೆನಪುಗಳಿವೆ, ಕಾಲೇಜಿನ ದಿನಗಳ ಸಾಹಸಗಳಿವೆ, ಉದ್ಯೋಗ ಪರ್ವದ ಪ್ರಯತ್ನಗಳು, ಆಲೋಚನೆಗಳು ಇತ್ಯಾದಿಗಳನ್ನು ಕುರಿತು ಆಪ್ತವಾದ ವಿವರಗಳಿವೆ. ಕತೆಗಳಿವೆ. ತಮಾಷೆಯಿದೆ, ಜೊತೆಗೆ ಒಂದಷ್ಟು ಕಾಣ್ಕೆಗಳಿವೆ. ಈ ಎಲ್ಲವೂ ವಾಸು ಅವರ ಬದುಕಿನ ಹಲವು ಮಗ್ಗಲುಗಳನ್ನು, ಸಾಧನೆಗಳನ್ನು ಪರಿಚಯಿಸುತ್ತವೆ.
ಈ ಬರಹಗಳ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವ ಎಲ್ಲರಿಗೂ ನಮ್ಮ ಕೃತಜ್ಞತೆಗಳು.

ನೇರ, ನಿಷ್ಠೂರ ನುಡಿಗಳಿಂದಲೇ ಪ್ರಿಯವಾಗುವ ವಾದೇಶ – ಡಾ ಗಂಗಾಧರ ರೆಡ್ಡಿ ಎನ್.

ಆಗಷ್ಟೇ ಸ್ನಾತಕೋತ್ತರ ಪದವಿ ಮುಗಿಸಿ ಉದ್ಯೋಗ ಹುಡುಕುತ್ತಿದ್ದ ಸಮಯದಲ್ಲಿ ಗೆಳೆಯ ವೀರೇಶನಿಂದ ಸಂಪರ್ಕಕ್ಕೆ ಬಂದ ವಾಸುದೇವ ಶರ್ಮಾರವರು ಮೊದಲ [...]

Go to Top