Vasu@60-logo
Home Page2026-01-16T07:29:03+00:00

“ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಕೇವಲ ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳ ಜವಾಬ್ದಾರಿಯಲ್ಲ. ಎಲ್ಲ ಮಕ್ಕಳ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇದೊಂದು ಸಾಮೂಹಿಕ ಜವಾಬ್ದಾರಿ. ಮಕ್ಕಳ ಹಕ್ಕುಗಳು ಕೇವಲ ಘೋಷಣೆಗಳಲ್ಲ. ಬದಲಾಗಿ ಎಲ್ಲೆಡೆ, ಎಲ್ಲ ಮಕ್ಕಳ ಯೋಗಕ್ಷೇಮ ಮತ್ತು ಘನತೆಯನ್ನು ಕಾಪಾಡಲು ಪ್ರತಿಯೊಬ್ಬ ವಯಸ್ಕರ ಅಚಲ ಬದ್ಧತೆಯನ್ನು ಆಗ್ರಹಿಸುವ ಮತ್ತು ಅವುಗಳನ್ನು ತಮ್ಮ ನಡೆ ನುಡಿಯಲ್ಲಿ ಅಳವಡಿಸಿಕೊಳ್ಳಲೇಬೇಕಿರುವ ಮಾರ್ಗದರ್ಶಿ ತತ್ತ್ವಗಳು.”

ಪ್ರಿಯರೆ,
ನಿಮ್ಮೆಲ್ಲರ ಗೆಳೆಯ, ಸಹೋದ್ಯೋಗಿ, ನನ್ನ ಬಾಳಸಂಗಾತಿ ಎನ್.ವಿ. ವಾಸುದೇವ ಶರ್ಮಾ ೬೦ ವರ್ಷಗಳನ್ನು ಪೂರೈಸಿ ಮುನ್ನಡೆದಿದ್ದಾರೆ. ಇಷ್ಟು ಕಾಲದಲ್ಲಿ ಅವರನ್ನು ಕಂಡವರು, ಜೊತೆಯಾಗಿ ಶಿಕ್ಷಣ ಪಡೆದವರು, ಕೆಲಸ ಮಾಡಿದವರು, ಇತ್ಯಾದಿ ವಾಸು ಅವರೊಡನೆಯ ಅನುಭವಗಳನ್ನು ಕುರಿತು ವಿವಿಧ ಬರಹಗಳಲ್ಲಿ  ಹಂಚಿಕೊಂಡಿದ್ದಾರೆ.

ಇದರಲ್ಲಿ ಬಾಲ್ಯದ ನೆನಪುಗಳಿವೆ, ಕಾಲೇಜಿನ ದಿನಗಳ ಸಾಹಸಗಳಿವೆ, ಉದ್ಯೋಗ ಪರ್ವದ ಪ್ರಯತ್ನಗಳು, ಆಲೋಚನೆಗಳು ಇತ್ಯಾದಿಗಳನ್ನು ಕುರಿತು ಆಪ್ತವಾದ ವಿವರಗಳಿವೆ. ಕತೆಗಳಿವೆ. ತಮಾಷೆಯಿದೆ, ಜೊತೆಗೆ ಒಂದಷ್ಟು ಕಾಣ್ಕೆಗಳಿವೆ. ಈ ಎಲ್ಲವೂ ವಾಸು ಅವರ ಬದುಕಿನ ಹಲವು ಮಗ್ಗಲುಗಳನ್ನು, ಸಾಧನೆಗಳನ್ನು ಪರಿಚಯಿಸುತ್ತವೆ.
ಈ ಬರಹಗಳ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವ ಎಲ್ಲರಿಗೂ ನಮ್ಮ ಕೃತಜ್ಞತೆಗಳು.

ಶರ್ಮನೆಂದರೆ ಮಕ್ಕಳ ಹಕ್ಕುಗಳ ವಿಶ್ವಕೋಶ ಮತ್ತು – ಶಿವರಾಂ ಪೈಲೂರು

ಮೈಸೂರಿನ ಮಹಾರಾಜ ಕಾಲೇಜು ದಿನಗಳಲ್ಲಿ ಶರ್ಮನೆಂದರೆ ಜುಬ್ಬಾ ಅಥವಾ ತುಂಬು ತೋಳಿನ ಅಂಗಿ, ಸಾದಾ ಪ್ಯಾಂಟು, ಕ್ರಾಸ್ ಆಗಿ [...]

ವಾಸುದೇವ ಶರ್ಮಾ: ನಾಲ್ಕು ದಶಕಗಳ ನಂಟು – ನಿರಂಜನ ವಾನಳ್ಳಿ

ವಾಸುದೇವ ಶರ್ಮನಿಗೆ ಅರವತ್ತು ಆಯಿತು ಎಂದು ಅವನ ಮಡದಿ ಲಕ್ಷ್ಮಿ ನೆನಪು ಮಾಡಿದಾಗ ವಾಸುವಿನ ಜೊತೆಗೆ ನನಗೂ ಅರವತ್ತಾದುದು [...]

60ರ ಹರೆಯದ ವಾಸುದೇವ ಶರ್ಮನಿಗೆ ಗೆಳೆಯ ಸಚ್ಚಿತ್‌ನ ಶುಭಾಶಯ – ಸಚಿತ್‌ ಶರ್ಮಾ

ಆಗಷ್ಟೆ ಪದವಿ ಪೂರ್ವ ಶಿಕ್ಷಣ ಮುಗಿಸಿ ಪದವಿ ಕಾಲೇಜು ರಂಗಕ್ಕೆ ಕಾಲಿಟ್ಟ ಆ ದಿನಗಳಲ್ಲಿ ಸ್ನೇಹ ಸಂಪಾದಿಸಿಕೊಳ್ಳುವ ಕಾತುರ [...]

ನಿಮ್ಮ ನೆನಪೇ ಖುಷಿ – ಲೋಕೇಶ್‌ ಮೊಸಳೆ

ಮಕ್ಕಳ ಹಕ್ಕುಗಳು ಅದರ ಸುತ್ತಮುತ್ತ ಇಷ್ಟು ವರ್ಷ ಚಿಂತಿಸಿದ, ಮಕ್ಕಳ ಬದುಕಿಗೆ ನೆರಳಾದ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು.  ತಮ್ಮ [...]

ನನ್ನನ್ನು ಪತ್ರಿಕೋದ್ಯಮಕ್ಕೆ ಕರೆತಂದ ವಾಸು – ಡಾ ಕೂಡ್ಲಿ ಗುರುರಾಜ

ವಾಸುದೇವ ಶರ್ಮಾನ ಬಗ್ಗೆ ಬರೆಯಲು ಕುಳಿತರೆ ನೆನಪುಗಳ ಮೆರವಣಿಗೆ ಸಾಗುತ್ತವೆ. ಅದು ನಮ್ಮ ಹೈಸ್ಕೂಲ್‌ ವಿದ್ಯಾಭ್ಯಾಸದ ದಿನಗಳು.  ನಾವು [...]

Go to Top