Vasu@60-logo
Home Page2026-01-16T07:29:03+00:00

“ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಕೇವಲ ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳ ಜವಾಬ್ದಾರಿಯಲ್ಲ. ಎಲ್ಲ ಮಕ್ಕಳ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇದೊಂದು ಸಾಮೂಹಿಕ ಜವಾಬ್ದಾರಿ. ಮಕ್ಕಳ ಹಕ್ಕುಗಳು ಕೇವಲ ಘೋಷಣೆಗಳಲ್ಲ. ಬದಲಾಗಿ ಎಲ್ಲೆಡೆ, ಎಲ್ಲ ಮಕ್ಕಳ ಯೋಗಕ್ಷೇಮ ಮತ್ತು ಘನತೆಯನ್ನು ಕಾಪಾಡಲು ಪ್ರತಿಯೊಬ್ಬ ವಯಸ್ಕರ ಅಚಲ ಬದ್ಧತೆಯನ್ನು ಆಗ್ರಹಿಸುವ ಮತ್ತು ಅವುಗಳನ್ನು ತಮ್ಮ ನಡೆ ನುಡಿಯಲ್ಲಿ ಅಳವಡಿಸಿಕೊಳ್ಳಲೇಬೇಕಿರುವ ಮಾರ್ಗದರ್ಶಿ ತತ್ತ್ವಗಳು.”

ಪ್ರಿಯರೆ,
ನಿಮ್ಮೆಲ್ಲರ ಗೆಳೆಯ, ಸಹೋದ್ಯೋಗಿ, ನನ್ನ ಬಾಳಸಂಗಾತಿ ಎನ್.ವಿ. ವಾಸುದೇವ ಶರ್ಮಾ ೬೦ ವರ್ಷಗಳನ್ನು ಪೂರೈಸಿ ಮುನ್ನಡೆದಿದ್ದಾರೆ. ಇಷ್ಟು ಕಾಲದಲ್ಲಿ ಅವರನ್ನು ಕಂಡವರು, ಜೊತೆಯಾಗಿ ಶಿಕ್ಷಣ ಪಡೆದವರು, ಕೆಲಸ ಮಾಡಿದವರು, ಇತ್ಯಾದಿ ವಾಸು ಅವರೊಡನೆಯ ಅನುಭವಗಳನ್ನು ಕುರಿತು ವಿವಿಧ ಬರಹಗಳಲ್ಲಿ  ಹಂಚಿಕೊಂಡಿದ್ದಾರೆ.

ಇದರಲ್ಲಿ ಬಾಲ್ಯದ ನೆನಪುಗಳಿವೆ, ಕಾಲೇಜಿನ ದಿನಗಳ ಸಾಹಸಗಳಿವೆ, ಉದ್ಯೋಗ ಪರ್ವದ ಪ್ರಯತ್ನಗಳು, ಆಲೋಚನೆಗಳು ಇತ್ಯಾದಿಗಳನ್ನು ಕುರಿತು ಆಪ್ತವಾದ ವಿವರಗಳಿವೆ. ಕತೆಗಳಿವೆ. ತಮಾಷೆಯಿದೆ, ಜೊತೆಗೆ ಒಂದಷ್ಟು ಕಾಣ್ಕೆಗಳಿವೆ. ಈ ಎಲ್ಲವೂ ವಾಸು ಅವರ ಬದುಕಿನ ಹಲವು ಮಗ್ಗಲುಗಳನ್ನು, ಸಾಧನೆಗಳನ್ನು ಪರಿಚಯಿಸುತ್ತವೆ.
ಈ ಬರಹಗಳ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವ ಎಲ್ಲರಿಗೂ ನಮ್ಮ ಕೃತಜ್ಞತೆಗಳು.

ಮುಗ್ಧ ಪ್ರೀತಿಯ ಶ್ರಮಜೀವಿ ವಾಸು – ಉಮಾಶಂಕರ್‌ ಪೆರಿಯೋಡಿ

೧೯೯೧ ಇರಬೇಕು. ಅರಸಿಕೆರೆಯ ಕೆ.ಜಿ.ಎನ್.ಎಂ.ಟಿ.ಯಲ್ಲಿ ನಮಗೆ ಡಿ.ಆರ್‌.ಯು. (District Resource Unit) ಶುರು ಮಾಡೋದಿತ್ತು. ಡಿಸ್ಟ್ರಿಕ್ ರಿಸೋರ್ಸ್ ಯೂನಿಟ್, [...]

ಸಡಗರದ ಓಡಾಟದ ವಾಸು – ವಾಣಿ ಪೆರಿಯೋಡಿ

ವಾಣಿ ಪೆರಿಯೋಡಿ “ನಾನು ವಾಸು… ಉಮಾ ಅವರ ಜೊತೆಗೆ ಕೆಲಸ ಮಾಡುತ್ತಿದ್ದೇನೆ..” ಲವಲವಿಕೆಯ ಯುವಕನೊಬ್ಬ ಬಂದು ತನ್ನ ಪರಿಚಯ [...]

ನಮ್ಮ ವಾಸು – ವಿಶ್ವ ವಿನ್ಯಾಸ್‌

ನೆಲಮಂಗಲ ವಿಶ್ವನಾಥ ವಾಸುದೇವ ಶರ್ಮಾ ಎನ್ನುವ ಹೆಸರು ನೆನಪಾದ ತಕ್ಷಣ ನನಗನಿಸುವುದು ʻಎನರ್ಜಿ'. ಅವನ (ನಾವಿಬ್ಬರೂ ಒಟ್ಟಿಗೆ ಮಾತಿಗೆ [...]

ಗೆಳೆಯ, ಸಹವರ್ತಿ, ಮಕ್ಕಳ ಹಕ್ಕುಗಳ ಪ್ರತಿಪಾದಕ – ವಾಸು ಉದಯ್‌ ಬೇಕಲ್‌

ಜಿಲ್ಲಾ ಸಂಪನ್ಮೂಲ ಕೇಂದ್ರ ಅರಸೀಕೆರೆಯಲ್ಲಿ ನಡೆದ ಹತ್ತು ದಿನಗಳ ಸಾಕ್ಷರತೆ ಕುರಿತು ತರಬೇತಿದಾರರ ತರಬೇತಿಯಲ್ಲಿ ವಾಸುವನ್ನು ಮೊದಲು ನೋಡಿದ್ದು, [...]

ಬಾಲಕಾರ್ಮಿಕರ ಬಿಡುಗಡೆ ಮತ್ತು ಪುನರ್ವಸತಿಯಲ್ಲಿ ಹೆಗಲಿಗೆ ಹೆಗಲೊಡ್ಡಿದ ವಾಸು – ಸರೋಜಾ

ಭದ್ರಾವತಿಯಿಂದ ಬೆಂಗಳೂರಿಗೆ 1994ರಲ್ಲಿ ವಲಸೆ ಬಂದ ನನಗೆ ಸಮಷ್ಠಿ ಸಂಸ್ಥೆಯ ಆಶ್ರಯದಲ್ಲಿ ಎನ್.ಜಿ.ಓ. ಬಳಗಕ್ಕೆ ಸೇರುವ ಸುಸಂಧಿ ಪ್ರಾಪ್ತವಾಯಿತು. [...]

Go to Top