Vasu@60-logo
Home Page2026-01-16T07:29:03+00:00

“ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಕೇವಲ ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳ ಜವಾಬ್ದಾರಿಯಲ್ಲ. ಎಲ್ಲ ಮಕ್ಕಳ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇದೊಂದು ಸಾಮೂಹಿಕ ಜವಾಬ್ದಾರಿ. ಮಕ್ಕಳ ಹಕ್ಕುಗಳು ಕೇವಲ ಘೋಷಣೆಗಳಲ್ಲ. ಬದಲಾಗಿ ಎಲ್ಲೆಡೆ, ಎಲ್ಲ ಮಕ್ಕಳ ಯೋಗಕ್ಷೇಮ ಮತ್ತು ಘನತೆಯನ್ನು ಕಾಪಾಡಲು ಪ್ರತಿಯೊಬ್ಬ ವಯಸ್ಕರ ಅಚಲ ಬದ್ಧತೆಯನ್ನು ಆಗ್ರಹಿಸುವ ಮತ್ತು ಅವುಗಳನ್ನು ತಮ್ಮ ನಡೆ ನುಡಿಯಲ್ಲಿ ಅಳವಡಿಸಿಕೊಳ್ಳಲೇಬೇಕಿರುವ ಮಾರ್ಗದರ್ಶಿ ತತ್ತ್ವಗಳು.”

ಪ್ರಿಯರೆ,
ನಿಮ್ಮೆಲ್ಲರ ಗೆಳೆಯ, ಸಹೋದ್ಯೋಗಿ, ನನ್ನ ಬಾಳಸಂಗಾತಿ ಎನ್.ವಿ. ವಾಸುದೇವ ಶರ್ಮಾ ೬೦ ವರ್ಷಗಳನ್ನು ಪೂರೈಸಿ ಮುನ್ನಡೆದಿದ್ದಾರೆ. ಇಷ್ಟು ಕಾಲದಲ್ಲಿ ಅವರನ್ನು ಕಂಡವರು, ಜೊತೆಯಾಗಿ ಶಿಕ್ಷಣ ಪಡೆದವರು, ಕೆಲಸ ಮಾಡಿದವರು, ಇತ್ಯಾದಿ ವಾಸು ಅವರೊಡನೆಯ ಅನುಭವಗಳನ್ನು ಕುರಿತು ವಿವಿಧ ಬರಹಗಳಲ್ಲಿ  ಹಂಚಿಕೊಂಡಿದ್ದಾರೆ.

ಇದರಲ್ಲಿ ಬಾಲ್ಯದ ನೆನಪುಗಳಿವೆ, ಕಾಲೇಜಿನ ದಿನಗಳ ಸಾಹಸಗಳಿವೆ, ಉದ್ಯೋಗ ಪರ್ವದ ಪ್ರಯತ್ನಗಳು, ಆಲೋಚನೆಗಳು ಇತ್ಯಾದಿಗಳನ್ನು ಕುರಿತು ಆಪ್ತವಾದ ವಿವರಗಳಿವೆ. ಕತೆಗಳಿವೆ. ತಮಾಷೆಯಿದೆ, ಜೊತೆಗೆ ಒಂದಷ್ಟು ಕಾಣ್ಕೆಗಳಿವೆ. ಈ ಎಲ್ಲವೂ ವಾಸು ಅವರ ಬದುಕಿನ ಹಲವು ಮಗ್ಗಲುಗಳನ್ನು, ಸಾಧನೆಗಳನ್ನು ಪರಿಚಯಿಸುತ್ತವೆ.
ಈ ಬರಹಗಳ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವ ಎಲ್ಲರಿಗೂ ನಮ್ಮ ಕೃತಜ್ಞತೆಗಳು.

ವಾಸು ಎಂಬ ಅರಳಿಮರ – ಡಾ ಜಿ. ರಾಮಕೃಷ್ಣ

ಭಗವದ್ಗೀತೆಯಲ್ಲಿ ಮಹತ್ತಾದ ಸತ್ತ್ವವನ್ನು ʻಊರ್ಧ್ವಮೂಲʼ ಮತ್ತು ʻಅಧಃಶಾಖʼ ಎಂದು ಹೆಸರಿಸಲಾಗಿದೆ: ಬೇರು ಮೇಲೆ ಮತ್ತು ಕೊಂಬೆಗಳು ಕೆಳಗೆ. ನಮ್ಮ [...]

ಗೆಳೆಯ ವಾಸು – ಶಶಿಧರ ಭಾರಿಘಾಟ್

ಗೆಳೆಯ ವಾಸು – ವಾಸುದೇವ ಶರ್ಮಾ ಅವರ ಬಗ್ಗೆ ಬರೆಯುವುದೆಂದರೆ ನಾಲ್ಕು ದಶಕಗಳಷ್ಟು ಹಿಂದಿನ ನೆನಪಿನ ಬುತ್ತಿಯನ್ನು ಬಿಚ್ಚಿ [...]

ವಾಸು ಅಂದರೆ ಏನು? – ಡಾ. ಕಮಲಾಕರ ಕಡವೆ

ವಾಸುದೇವ ಶರ್ಮಾ ಅವರೊಂದಿಗೆ ನನ್ನ ಒಡನಾಟ ಇದ್ದದ್ದು ಕೇವಲ ಒಂದು ವರುಷ ಮಾತ್ರ: ಮೈಸೂರಿನ ಮಹಾರಾಜ ಕಾಲೇಜಿನಲ್ಲಿ, 1985-86 [...]

ಮಗು ಮನಸ್ಸಿನ ಜಂಗಮ ಸಂಘಟಕ ವಾಸು – ಪ್ರಕಾಶ್‌ ರಾವಂದೂರು

ತುಂಬ ತುಂಟ, ಗಲಾಟೆ ಮಾಡುವ ಮಗುವನ್ನು ಬಹುಮಾನದ ಆಸೆ ತೋರಿಸಿ ಚಕ್ಕಂಬಕ್ಕಳ ಹಾಕಿ ಕೂತು, ಮಾತಾಡದಂತೆ ಬಾಯಿಗೆ ಬೀಗ [...]

ವಾಸು ಎಂಬ ಬೆಳಕಿಗೆ 60 – ಎಂ.ಕೆ. ಆನಂದ ರಾಜೇ ಅರಸ್

ಮೈಸೂರಿನಲ್ಲಿರುವ ಚಾಮುಂಡಿಪುರಂನ ಪ್ರಧಾನ ವೃತ್ತ ಮೈಸೂರಿನ ಪ್ರಮುಖ ತಾಣಗಳಲ್ಲಿ ಒಂದು. ೮೦ರ ದಶಕದಲ್ಲಿ ಈ ವೃತ್ತ ಚಟುವಟಿಕೆಗಳ ಆಗರವಾಗಿತ್ತ್ತು. [...]

ನನಗೊಂದು ಎಚ್ಚರಿಕೆಯ ನೆರಳಾಗಿರುವ ವಾಸುದೇವ ಶರ್ಮಾ – ಚಂದ್ರಶೇಖರ ಬೆಳಗೆರೆ

ಮೈಸೂರಿಗೆ ಬಂದು ತಿಂಗಳಾಗಿತ್ತು. ಮಹಾರಾಜಾ ಕಾಲೇಜಿಗೆ ಸೇರಿ ವಾರವೂ ಕಳೆದಿರಲಿಲ್ಲ. ಆಗೊಂದು ದಿನ ಕಾಲೇಜಿನ ಪ್ರಾಂಗಣದಲ್ಲಿ “ಧ್ವನಿ” ಎಂಬ [...]

ಮಕ್ಕಳ ಪರವಾದ ದನಿ ವಾಸು – ಪರಶುರಾಮ್

ಮಕ್ಕಳು ಈ ದೇಶದ ಸಂಪತ್ತು. ಅವರಿಗೆ ಬಾಲ್ಯದಲ್ಲಿ ಆಗುವ ಗಾಯ ಮಾಯುವುದೇ ಇಲ್ಲ. ಆ ನೋವು ನಿರಂತರ. ಹಾಗಾಗಿ [...]

ನಾಟಕದಿಂದ ನನ್ನನ್ನು ಮಕ್ಕಳ ಕ್ಷೇತ್ರಕ್ಕೆ ಎಳೆತಂದವರು ವಾಸು – ಅಶ್ವತ್ಥನಾರಾಯಣ

ಮಹಾರಾಜ ಕಾಲೇಜಿಗೆ ಸೇರಿದ ಪ್ರಾರಂಭದಲ್ಲಿ ನನಗೆ ಅಕ್ಷರಶಃ ಆತಂಕ ಶುರುವಾಗಿತ್ತು. ಆ ದೊಡ್ಡ ಕಟ್ಟಡದ ತುಂಬಾ ಸಾವಿರಾರು ವಿದ್ಯಾರ್ಥಿಗಳು. [...]

Go to Top