Vasu@60-logo
Home Page2026-01-16T07:29:03+00:00

“ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಕೇವಲ ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳ ಜವಾಬ್ದಾರಿಯಲ್ಲ. ಎಲ್ಲ ಮಕ್ಕಳ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇದೊಂದು ಸಾಮೂಹಿಕ ಜವಾಬ್ದಾರಿ. ಮಕ್ಕಳ ಹಕ್ಕುಗಳು ಕೇವಲ ಘೋಷಣೆಗಳಲ್ಲ. ಬದಲಾಗಿ ಎಲ್ಲೆಡೆ, ಎಲ್ಲ ಮಕ್ಕಳ ಯೋಗಕ್ಷೇಮ ಮತ್ತು ಘನತೆಯನ್ನು ಕಾಪಾಡಲು ಪ್ರತಿಯೊಬ್ಬ ವಯಸ್ಕರ ಅಚಲ ಬದ್ಧತೆಯನ್ನು ಆಗ್ರಹಿಸುವ ಮತ್ತು ಅವುಗಳನ್ನು ತಮ್ಮ ನಡೆ ನುಡಿಯಲ್ಲಿ ಅಳವಡಿಸಿಕೊಳ್ಳಲೇಬೇಕಿರುವ ಮಾರ್ಗದರ್ಶಿ ತತ್ತ್ವಗಳು.”

ಪ್ರಿಯರೆ,
ನಿಮ್ಮೆಲ್ಲರ ಗೆಳೆಯ, ಸಹೋದ್ಯೋಗಿ, ನನ್ನ ಬಾಳಸಂಗಾತಿ ಎನ್.ವಿ. ವಾಸುದೇವ ಶರ್ಮಾ ೬೦ ವರ್ಷಗಳನ್ನು ಪೂರೈಸಿ ಮುನ್ನಡೆದಿದ್ದಾರೆ. ಇಷ್ಟು ಕಾಲದಲ್ಲಿ ಅವರನ್ನು ಕಂಡವರು, ಜೊತೆಯಾಗಿ ಶಿಕ್ಷಣ ಪಡೆದವರು, ಕೆಲಸ ಮಾಡಿದವರು, ಇತ್ಯಾದಿ ವಾಸು ಅವರೊಡನೆಯ ಅನುಭವಗಳನ್ನು ಕುರಿತು ವಿವಿಧ ಬರಹಗಳಲ್ಲಿ  ಹಂಚಿಕೊಂಡಿದ್ದಾರೆ.

ಇದರಲ್ಲಿ ಬಾಲ್ಯದ ನೆನಪುಗಳಿವೆ, ಕಾಲೇಜಿನ ದಿನಗಳ ಸಾಹಸಗಳಿವೆ, ಉದ್ಯೋಗ ಪರ್ವದ ಪ್ರಯತ್ನಗಳು, ಆಲೋಚನೆಗಳು ಇತ್ಯಾದಿಗಳನ್ನು ಕುರಿತು ಆಪ್ತವಾದ ವಿವರಗಳಿವೆ. ಕತೆಗಳಿವೆ. ತಮಾಷೆಯಿದೆ, ಜೊತೆಗೆ ಒಂದಷ್ಟು ಕಾಣ್ಕೆಗಳಿವೆ. ಈ ಎಲ್ಲವೂ ವಾಸು ಅವರ ಬದುಕಿನ ಹಲವು ಮಗ್ಗಲುಗಳನ್ನು, ಸಾಧನೆಗಳನ್ನು ಪರಿಚಯಿಸುತ್ತವೆ.
ಈ ಬರಹಗಳ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವ ಎಲ್ಲರಿಗೂ ನಮ್ಮ ಕೃತಜ್ಞತೆಗಳು.

ಸಮಾಜಕಾರ್ಯದ ಮಾದರಿ ವ್ಯಕ್ತಿ ಮತ್ತು ವ್ಯಕ್ತಿತ್ವ ನಮ್ಮ ವಾಸು ಸರ್ – ನಾಗರಾಜ ಬಿ.ಜಿ.

2004ರಲ್ಲಿ ಅಂಕ ತಂಡ (ಅಂಗವಿಕಲರ ಕಲಾ ತಂಡ) ದ ಸಮಾರೋಪ ಸಮಾರಂಭದಲ್ಲಿ [...]

ವಾಸು ಸರ್‌ ಎಂದರೆ ʻಎಲ್ಲರ ಕುರಿತು ಕಾಳಜಿʼ – ನಾಗಮಣಿ ಸಿ.ಎನ್.

ನಾನು ಸಂದರ್ಶನಕ್ಕೆಂದು ಸಿ.ಆರ್.ಟಿ.ಸಂಸ್ಥೆಗೆ ಬಂದು ಮಾತನಾಡಿ ಆಯಿತು. ನಾಳೆ ಸಿದ್ದರಬೆಟ್ಟದಲ್ಲಿ ಮಕ್ಕಳ [...]

ಮಕ್ಕಳ ಹಕ್ಕುಗಳ ಮಾಹಿತಿಯ ಕಣಜ-ವಾಸು ಸರ್ – ವೆಂಕಟೇಶ್‌ ಟಿ.

ಎಲ್ಲ ಹಕ್ಕುಗಳು ಎಲ್ಲ ಮಕ್ಕಳಿಗೂ ಸಿಗಬೇಕು ಎಂಬ ಧ್ಯೇಯವಾಕ್ಯದೊಂದಿಗೆ ಚೈಲ್ಡ್ ರೈಟ್ಸ್ [...]

ಕರ್ನಾಟಕದ ಮಕ್ಕಳ ಕ್ಷೇತ್ರದ ಧ್ರುವ ತಾರೆ – ರಾಜಶ್ರೀ ಬಿ ವಡ್ಲಿ

ಜೀವನವೆಂಬುದು ಸದಾ ಹರಿಯುವ ನೀರು ಎಂಬುವಂತೆ, ನಾವು ಸಾಗುವ ನಮ್ಮ ಜೀವನದ [...]

ಮಕ್ಕಳ ಹಕ್ಕುಗಳ ಗ್ರಾಮಸಭೆಯ ಜನಕನಿಗೆ 60ರ ಸಂಭ್ರಮ: ಸುಮನ ಮತ್ತು ಗೌತಮ್‌

ಮಕ್ಕಳ ಹಕ್ಕುಗಳ ಗ್ರಾಮಸಭೆಯ ಪರಿಕಲ್ಪನೆಯನ್ನು ಕೊಟ್ಟ ಮಕ್ಕಳ ಹಕ್ಕುಗಳ ಹರಿಕಾರ [...]

ತರಕಾರಿ, ಸೊಪ್ಪು ನೀಡುವ ಶರ್ಮಾ ಸರ್‌ – ಮಂಜುನಾಥ ಅಮಲಗೊಂದಿ

ಮಕ್ಕಳ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದಂತಹ ಮಹನೀಯರಲ್ಲಿ ವಾಸುದೇವ ಶರ್ಮಾ ರವರು ಮೊದಲ ಪಂಕ್ತಿಯಲ್ಲಿ ನಿಲ್ಲುವರೆಂಬ ಭಾವನೆ ನನ್ನಲ್ಲಿದೆ. [...]

Go to Top