ನಿಮ್ಮ ನೆನಪೇ ಖುಷಿ – ಲೋಕೇಶ್‌ ಮೊಸಳೆ

Last Updated: February 21, 2026By

ಮಕ್ಕಳ ಹಕ್ಕುಗಳು ಅದರ ಸುತ್ತಮುತ್ತ ಇಷ್ಟು ವರ್ಷ ಚಿಂತಿಸಿದ, ಮಕ್ಕಳ ಬದುಕಿಗೆ ನೆರಳಾದ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. 

ತಮ್ಮ ಹುಟ್ಟಿನಿಂದ ಸಮಾಜಕ್ಕೆ ಒಳ್ಳೆಯದಾಗಿದೆ. ತಮ್ಮ ಬದುಕು ಮತ್ತು ಕ್ರಿಯೆಯಿಂದ ನಮ್ಮ ಸಮಾಜ ಸಾರ್ಥಕತೆಯನ್ನು ಪಡೆದಿದೆ. ನನಗೂ ನಿಮ್ಮ ಒಡನಾಟ ಪ್ರೀತಿ ವಿಶ್ವಾಸಗಳೆಲ್ಲ ಸಿಕ್ಕಿದ್ದರ ಪರಿಣಾಮ ನನ್ನ ಬದುಕೂ ಕೂಡ ಚೇತೋಹಾರಿಯಾಗಿದೆ. 

ಮೈಸೂರು ಮಹಾರಾಜಾ ಕಾಲೇಜಿನ ನೆಬೆ ಕಟ್ಟೆಯಲ್ಲಿನ ಮೈಸೂರು ಮುದುಕ ಇನ್ನೂ ನನ್ನೊಳಗಿದ್ದಾನೆ. ನನ್ನ ವನ್ಯಜೀವಿ ಛಾಯಾಚಿತ್ರ ಪ್ರದರ್ಶನಕ್ಕೆ ನೀವು ಬಂದು ಚಿತ್ರಗಳನ್ನು ನೋಡಿ ಆನಂದಿಸುತ್ತಿದ್ದ ನಿಮ್ಮ ಕಣ್ಣುಗಳು, ಪುಳಕದಿಂದ ವೀಕ್ಷಿಸಿದ ಕ್ಷಣಗಳನ್ನು ನಾನು ಕಣ್ಣಾರೆ ಕಂಡಿರುವೆ. ಆ ನೆನಪು ಇನ್ನೂ ನನ್ನೊಳಗಿದೆ. 

ಪ್ರೀತಿ ವಿಶ್ವಾಸಗಳನ್ನೇ ಬದುಕನ್ನಾಗಿಸಿಕೊಂಡು ನಗುನಗುತ್ತ ಬದುಕಿದ ನಿಮಗೆ ಬಾಳ ಸಂಗಾತಿಯಾಗಿ ಜೊತೆ ಸೇರಿದ ಲಕ್ಷ್ಮಿಯವರನ್ನು ಕೂಡ ಅವರು ಪತ್ರಿಕೋದ್ಯಮ ಓದುವ ದಿನಗಳಲ್ಲಿಯೇ (ನಿಮಗಿಂತ ಮೊದಲು ಒಂದೆರಡು ವರುಷದಿಂದ) ಕಂಡಿರುವೆ. 

ಲಕ್ಷ್ಮಿ ಅವರು ನಿಮಗೆ ಸಂಗಾತಿಯಾಗಿ ಸಿಕ್ಕಿದ್ದು ಕೂಡ ಪರಸ್ಪರ ನಿಮ್ಮಿಬ್ಬರ ಪುಣ್ಯವೇ ಎನ್ನುವುದು ನನ್ನ ಭಾವನೆ. 

ಇದೆಲ್ಲ ಏನೇ ಇರಲಿ ಒಂದು ಜೀವ ಹುಟ್ಟಿದ ಮೇಲೆ ಅದು ತನಗಲ್ಲದೆ ತನ್ನ ಸಮಾಜಕ್ಕೆ ತನ್ನ ಕುಟುಂಬಕ್ಕೆ ತನ್ನ ನೆರೆಯವರಿಗೆ ಜನ್ಮ ನೀಡಿದ ಈ ನೆಲಕ್ಕೆ ಖುಷಿಯಾಗುವಂತಹ ಚಿಂತನೆ ಕೆಲಸಗಳನ್ನು ಯಾರು ಮಾಡುತ್ತಾರೋ ಅಂಥವರ ಹುಟ್ಟು ಈ ಸಮಾಜಕ್ಕೆ ಮುಖ್ಯ. ಅಂತಹ ಕೆಲಸಗಳು ನಿಮ್ಮಿಂದ ಆಗಿದೆ. ಹೀಗಾಗಿ ನಿಮ್ಮನ್ನು ನೆನೆದರೆ ನನಗಂತೂ ಖುಷಿ…. ನನ್ನ ಈ ಖುಷಿಯಲ್ಲಿ ನಿಮಗಿದೋ ನನ್ನ ಪ್ರೀತಿಯ ಶುಭಾಶಯಗಳು…

  • ಲೋಕೇಶ್‌ ಮೊಸಳೆ, ವನ್ಯಜೀವಿ ಛಾಯಾಗ್ರಾಹಕ, ಮೈಸೂರು