ಗೆಳೆಯ, ಸಹವರ್ತಿ, ಮಕ್ಕಳ ಹಕ್ಕುಗಳ ಪ್ರತಿಪಾದಕ – ವಾಸು ಉದಯ್‌ ಬೇಕಲ್‌

Last Updated: February 21, 2026By

ಜಿಲ್ಲಾ ಸಂಪನ್ಮೂಲ ಕೇಂದ್ರ ಅರಸೀಕೆರೆಯಲ್ಲಿ ನಡೆದ ಹತ್ತು ದಿನಗಳ ಸಾಕ್ಷರತೆ ಕುರಿತು ತರಬೇತಿದಾರರ ತರಬೇತಿಯಲ್ಲಿ ವಾಸುವನ್ನು ಮೊದಲು ನೋಡಿದ್ದು, ಕಾರ್ಯಾಗಾರದಲ್ಲಿ  ಸಕ್ರಿಯವಾಗಿ ಎಲ್ಲರೊಂದಿಗೆ ಒಡನಾಡುವ ವ್ಯಕ್ತಿಯಾಗಿ ಕಂಡರು. ಮುಂದೆ ನಾನು ಸಮುಚ್ಛಯದ ಚೌಕಿ ಯೋಜನೆಯಲ್ಲಿ ಕಾರ್ಯಕರ್ತನಾಗಿದ್ದಾಗ ನಮ್ಮ ಡೋನರ್‌ /Donor ಆಗಿ CRY ಮೂಲಕ ವಾಸು ಜೊತೆ ನಿರಂತರ ಸಂಪರ್ಕ ಬೆಳೆಯಿತು. ಮಕ್ಕಳ ಹಕ್ಕುಗಳ ಅರಿವು ಮೂಡಿಸುವ ಕಾರ್ಯಾಗಾರ ನಡೆಸಿ ಮಾಹಿತಿ ನೀಡುತ್ತಿದ್ದರು. ಅಲ್ಲಿಂದಲೇ ಮಕ್ಕಳ ಹಕ್ಕು ವಾಸುವಿನ ವ್ಯಕ್ತಿತ್ವದ ಭಾಗವಾಗಿ ಪರಿವರ್ತಿತವಾಗಿದೆ. ಮಕ್ಕಳ ಹಕ್ಕುಗಳ ಸ್ಥಾಪನೆಗಾಗಿ ನಿರಂತರ ಧ್ವನಿಯಾಗಿ ಕಾರ್ಯಾನುಭವ ಗಳಿಸುವ ಪ್ರಕ್ರಿಯೆ ಕಂಡು ಬೆರಗಾಗಿದ್ದೇನೆ. Child Rights ಅಂದ್ರೆ ವಾಸು ಎಂದು ಎಲ್ಲರಿಗೂ ಚಿರಪರಿಚಿತರು…

ಮುಂದೆ ಸಮುಚ್ಛಯದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಜೊತೆಯಾಗಿ ಕಲಿಯಲಾರಂಭಿಸಿದೆವು.  ವಾಸು ನಡೆಸಿದ ಉಪನ್ಯಾಸದಲ್ಲಿ ಭಾಗಿಯಾಗಿದ್ದೆ. ಸುಸ್ಥಿರ ಅಭಿವೃದ್ಧಿ ಬಗ್ಗೆ ಸ್ಪಷ್ಟ ಪರಿಕಲ್ಪನೆ ಹೊಂದಿದ್ದಾರೆ. ತಳಮಟ್ಟದಿಂದ ನೀತಿ ನಿರೂಪಣೆವರೆಗೆ ಕಾರ್ಯ ನಡೆಸುವ ಕೌಶಲ್ಯ ಮತ್ತು ಜ್ಞಾನ ವಾಸು ಗಳಿಸಿದ್ದಾರೆ.ಇತ್ತೀಚಿಗೆ ಹದಿಹರೆಯದ ಹೆಣ್ಣುಮಕ್ಕಳ ಯೋಗಕ್ಷೇಮ ಕುರಿತು ಕಾರ್ಯಕ್ರಮದ ಯೋಜನೆ ತಯಾರಿ ಖುಷಿ ಕೊಟ್ಟ ವಿಚಾರ. ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುವ, ನ್ಯಾಯಪರ ಒಡನಾಡಿಗಳನ್ನು ಗೌರವಿಸುವ, ತನ್ನ ವಿಚಾರ, ನಂಬಿಕೆಗಳ ಬಗ್ಗೆ ಸ್ಪಷ್ಟವಾಗಿ ಅಭಿವ್ಯಕ್ತಿಸುವ ವ್ಯಕ್ತಿ, ಆತ್ಮೀಯ ಗೆಳೆಯ ವಾಸುವಿನ 60ನೇ ವರುಷದ ಹುಟ್ಟುಹಬ್ಬಕ್ಕೆ ಪ್ರೀತಿಯ ಶುಭಹಾರೈಕೆಗಳು.

  • ಉದಯ್‌ ಬೇಕಲ್‌, ಅಜೀಂ ಪ್ರೇಮ್‌ ಜಿ ಫೌಂಡೇಶನ್‌, ಹೊಸಪೇಟೆ